Sumant Suresh Kulkarni

ಧಾರ್ಮಿಕ ನಂಬಿಕೆಗಳ ಚೌಕಟ್ಟಿನಲ್ಲಿ….

In We the people on April 16, 2009 at 4:08 pm

ಸುಮಾರು ಒಂದು ತಿಂಗಳಿಂದ ಸುದ್ದಿಯಲ್ಲಿರುವ ಮನುಷ್ಯ ವರುಣ್ ಗಾಂಧಿ. ಕಾರಣ ಸರಿಯಿಲ್ಲದಿರಬಹುದು, ಆದರೆ, ಅದು ಜನರ ಗಮನ ಸೆಳೆಯಲು, ಮತ್ತು ಜನಪ್ರೀಯತೆ ಗಳಿಸಲು ಸಾಧ್ಯವಾದದ್ದಂತೂ ಸುಳ್ಳಲ್ಲ. ಹೀಗೆ, ಜನರನ್ನು ಧಾರ್ಮಿಕವಾಗಿ ಒಡೆಯಲು ಮಾಡುವಪ್ರಯತ್ನಗಳಉ ತುಂಬಾ ಅಪಾಯಕಾರಿ ಮತ್ತು, ಅಸಹ್ಯಕರ. ಹಾಗೆಂದಮಾತ್ರಕ್ಕೆ, ಕೇವಲ ವರುಣ್ ಗಾಂಧಿಯೊಬ್ಬನೇ ಈ ರೀತಿಯ ರಾಜಕೀಯ ನಡೆಸುತ್ತಿದ್ದಾನೆಯೇ? ಬಿಹಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತುಂಬಾ ಹತ್ತಿರದಿಂದ ನೋಡಿದಾಗ, ಭಯವುಂಟಾಗುತ್ತದ.

ಲಾಲೂ ಪ್ರಸಾದರ ಹೇಳಿಕೆಯನ್ನು ನಾವು ಗಮನಿಸಿ -”ನಮ್ಮ ದೇಶದಲ್ಲಿ ಬ್ರಾಹ್ಮಣರನ್ನು ದೇವರೆಂದು ಪರಿಗಣಿಸುತ್ತೇವೆ. ಅವರ ಆಶೀರ್ವಾದವಿಲ್ಲದೇ, ಯಾರೊಬ್ಬರೂ ರಾಜರಾಗಲೂ ಸಾಧ್ಯವಿಲ್ಲ”. ಹಿಂದೊಮ್ಮೆ ಪಕ್ಕಾ ಬ್ರಾಹ್ಮಣ ವಿರೋಧಿಯಾಗಿದ್ದ ಲಾಲೂ, ಈಗ ಬ್ರಾಹ್ಮಣ ಹಿತರಕ್ಷಕ. (ದಿ. ೩೦/೦೩/೨೦೦೯ ವಿಜಯ ಕರ್ನಾಟಕ ದಿನಪತ್ರಿಕೆಯೋದಿದರೆ, ನಿಮಗಿದು ಇನ್ನೂ ವಿವರದಲ್ಲಿ ತಿಳಿದೀತು. ಪುಟ ೯). ಮೊನ್ನೆ ಮೊನ್ನೆಯವರೆಗೂ ಬ್ರಾಹ್ಮಣರ ಬಗ್ಗೆ ಅಸಹ್ಯಕರವಾಗಿ ಮಾತನಾಡುತ್ತಿದ್ದ ಪಾಸ್ವಾನ್ ಇಂದು ಲಾಲುವಿನ ಮಾತಿಗೆ ತಲೆಯಾಡಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲೂ ಮಾಯಾವತಿ ಬ್ರಾಹ್ಮಣರಿಗೆ ಮೀಸಲಾತಿಯ ಆಶ್ವಾಸನೆ ಕೊಡುತ್ತಿದ್ದಾಳೆ. ಇದೆಲ್ಲಾ ಯಾಕೆ? ಇದು ಭಾರತೀಯ ಸಂವಿಧಾನದ ಉಲ್ಲಂಘನೆಯಲ್ಲವೇ?? ಅಥವಾ, ಕೊನೆಯ ಪಕ್ಷ, ಇದು, ಒಡೆದು ಆಳುವ ನೀತಿಯಲ್ಲವೇ? ಇವರನ್ನು ಯಾರೋ ಏಕೆ ಪ್ರಶ್ನಿಸುವದಿಲ್ಲ?

ನಾನು ಮಾತನಾಡುತ್ತಿರುವದು, BJPಯ ಪರವೂ ಅಲ್ಲ, ಇತರ ಪಕ್ಷಗಳ ವಿರೋಧಕ್ಕೂ ಅಲ್ಲ, ಅದು ಇಂದಿನ ರಾಜಕೀಯ ಎಂಥ ಪರಿಸ್ಥಿತಿಯಬಗ್ಗೆ. ನಮ್ಮಲ್ಲಿನ ವಿರೋಧಾಭಾಸಗಳನ್ನೇ ಗಮನಿಸಿ. ಯಾರಾದ್ರೂ BJPಯ ವಿರೋಧದಲ್ಲಿ ಮಾತನಾಡಿದರೆ, ಅವರನ್ನು ನಾವು ಕಾಂಗ್ರೆಸ್‍ನ್ ಬೆಂಬಲಿಗರೆಂದೋ, ಅಥವಾ ಕಮ್ಯುನಿಸ್ಟರೆಂದೋ ಗುರುತಿಸುತ್ತೇವೆ. ಅವರ ಮುಂದೆ, ಕಾಂಗ್ರೆಸನ್ನೋ, CPIಯನ್ನೋ ಬೈದು ಸಮಾಧಾನಪಟ್ಟುಕೊಳ್ಳುತ್ತೇವೆ ಕೂಡ. ಅಂದರೆ, ಎಲ್ಲರನ್ನೂ ನಾವು ಒಂದಲ್ಲ ಒಂದು ಪಕ್ಷದವರೆಂದೇ ಗುರುತಿಸಿಬಿಡುತ್ತೇವೆ.

ಹಾಗೆಂದ ಮಾತ್ರಕ್ಕೆ, ಈ ಎಲ್ಲ ರಾಜಕಾರಣಿಗಳನ್ನೂ, ಅವರ ಪಕ್ಷಗಳ ಭ್ರಷ್ಟಾಚಾರವನ್ನೂ ಪ್ರಶ್ನಿಸುವ ವ್ಯಕ್ತಿಗೆ ಅಸ್ತಿತ್ವವೇ ಇಲ್ಲವೇ? “ಎಲ್ಲ ರಾಜಕಾರಣಿಗಲೂ ಸ್ವಾರ್ಥಿಗಳು; ಅವರನ್ನು ನಾವೆಲ್ಲ ಒಟ್ಟಾಗಿ ಸೇರಿ ವಿರೋಧಿಸಬೇಕೆಂಬ” ಪ್ರಜ್ಞೆ ನಮ್ಮಲ್ಲಿ ಯಾಕೆ ಮೂಡುವುದಿಲ್ಲ. ನಮ್ಮ ದೈನಂದಿನ ಜೀವನವನ್ನು ನಾವು ರಾಜಕಾರಣದಿಂದ ಬೇರ್ಪಡಿಸಿ ಯಾಕೆ ನೋಡುವದಿಲ್ಲ?

ಧಾರ್ಮಿಕ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ಧಾರ್ಮಿಕ ಜವಾಬ್ದಾರಿಯೂ ಅಷ್ಟೇ ಮುಖ್ಯ. ಸ್ವಾತಂತ್ರ್ಯ ಹಕ್ಕನ್ನು ಪ್ರತಿಪಾದಿಸುತ್ತ, ನಮ್ಮ ಧರ್ಮವನ್ನು ಪಾಲಿಸುವ ಅನುಮತಿ ಕೊಟ್ಟರೆ, ಧಾರ್ಮಿಕ ಜವಾಬ್ದಾರಿ, ನಮ್ಮ ಧರ್ಮ ಇನ್ನೊಬ್ಬರ ಮೇಲೆ ಭಾರವಾಗದಿರುವಂತೆ ನೋಡಿಕೊಳ್ಳುವ ಲಕ್ಷ್ಮಣರೇಖೆ ಹಾಕುತ್ತದೆ. ಅಲ್ಲದೇ, ಧಾರ್ಮಿಕ ಜವಾಬ್ದಾರಿ ನಮ್ಮ ನಮ್ಮ ಧರ್ಮದ ಆಧಾರದ ಮೇಲೆ ಈ ಸಮಾಜವನ್ನು ಒಡೆಯದಿರುವಂತೆ ನೋಡಿಕೊಳ್ಳೂವಂತೆಯೂ ತಿಳಿಸುತ್ತದೆ.
ಅಂದರೆ, ಧರ್ಮ, ನಾವು, ನಮ್ಮ ಮನೆಯಲ್ಲಿ ಆಚರಿಸಿಕೊಳ್ಳಬೇಕಾದ ಸಂಪ್ರದಾಯಕ್ಕೆ ಮಾತ್ರ ಸಂಬಂಧಿಸಿದೆ. ಸಾಮಾಜಿಕವಾಗಿ, ನಾವು ಯಾವುದೇ ಧರ್ಮವನ್ನು ಬೆಂಬಲಿಸುವಂತಿಲ್ಲ. Smiling . ಅದು, ಹಿಂದೂ ದರ್ಮವೇ ಆಗಿರಲಿ, ಇಸ್ಲಾಂ ಧರ್ಮವೇ ಆಗಿರಲಿ ಅಥವಾ ಕ್ರಿಶ್ಚಿಯನ್- ಸಿಖ್ ಧರ್ಮಗಳೇ ಆಗಿರಲಿ. ಆದರೆ, ಈ ಸ್ವಾತಂತ್ರೋತರ ೫ ದಶಕಗಳಲ್ಲಿ ಮಾಡಿದ್ದಾದರೂ ಏನು? ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಉಳಿದೆಲ್ಲವರನ್ನೂ ಮಾನಸಿಕವಾಗಿ ಹಿಂಸಿಸಿಲಾಗಿದೆ. ಅಲ್ಪಸಂಖ್ಯಾತರ ಉದ್ಧಾರ ಮಾಡುತ್ತೇವೆ, ಎಂದು ಅವರನ್ನು ನಂಬಿಸಿ, ಇನ್ನೂ ಅವರನ್ನು ಅಲ್ಲಿಯೇ ಇಡಲಾಗಿದೆ. ಇದರಿಂದ ನಿಜವಾಗಿಯು ಹಿಂದುಳಿದವರಾರಿಗೂ ಯಾವ ಉಪಯೋಗವೂ ಆಗಿಲ್ಲ. ಆಗುವುದೂ ಇಲ್ಲ!!!

 
ನಾನು ಇಷ್ಟು ಮಾತನಾಡಿದ್ದೇ ತಡ, ಅನೇಕರು ಈಗಾಗಲೇ – “ಇವನು ಮೀಸಲಾತಿಯ ವಿರೋಧಿ.. ಹಾಗೇ ಹಿಂದುಳಿದ ವರ್ಗಗಳ ವಿರೋಧಿ..” ಎಂಬ ಅಭಿಪ್ರಾಯಕ್ಕೆ ಬಂದುಬಿಟ್ಟಿರುತ್ತಾರೆ. ಅವರಿಗೆ, ನಿಜವಾಗಿಯೂ ನಡಿಯುತ್ತಿರುವ ದೌರ್ಜನ್ಯಕ್ಕಿಂತ, “ಇನ್ನೊಬ್ಬನ್ಯಾರೋ ಅವರಬಗ್ಗೆ ಮಾತನಾಡುತ್ತಿದ್ದಾನಲ್ಲ?” ಎಂಬ ಮಾತೇ ದೊಡ್ಡದಾಗಿಯೂ ಕಂಡುಬರುತ್ತದೆ. ಇದನ್ನು ನಾನು ಅನೇಕ ಚರ್ಚೆಗಳಲ್ಲಿ ಗಮನಿಸಿದ್ದೇನೆ ಕೂಡ. ಆದರೆ, ಈ “ನಮ್ಮವ, ತಮ್ಮವ” ಎಂಬ ಶಬ್ದಗಳಸುತ್ತ ಸುತ್ತಾಡದೇ, ತಾರ್ಕಿಕವಾಗಿ ಎಲ್ಲರೂ ಯೋಚಿಸಬೇಕಾದದ್ದು ತುಂಬಾ ಅಗತ್ಯ. ಹಾಗೇ, ನಮ್ಮಲ್ಲಿರುವ ಅಸಮಾನತೆಯನ್ನು ನಿಜವಾಗಲೂ ಹೇಗೆ ಇಲ್ಲವಾಗಿಸಬೇಕು ಎಂಬೆಡೆಗೆ, ನವೀನ ರೀತಿಯಲ್ಲಿ ಯೋಚಿಸಲೂಬೇಕು.

 

ಇದು ಹಿಂದುಗಳ ಪಕ್ಷ, ಇದು, ಮುಸ್ಲಿಮರದು ಇದು ಸಿಖ್ಖರದು ಎಂದು ವಿಭಜಿಸುವಬದಲು, ನಾವು ಆ ಪಕ್ಷದ ಸಾಮಾಜಿಕ ಅಸ್ತಿತ್ವವನ್ನು ಒಮ್ಮೆ ಪ್ರಶ್ನಿಸಿನೋಡಬೇಕು. ಅದರ ಮಾನವೀಯ ಮೌಲ್ಯಗಳ ಬಗ್ಗೆ ಚರ್ಚೆಯಾಗಬೇಕು. ವಿಭಜಕ ಶಕ್ತಿಗಳ ನಿರ್ಮೂಲನೆಯಾಗಬೇಕು (ಇಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸೇರುತ್ತವೆ). ಧಾರ್ಮಿಕತೆ, ನಮ್ಮ ಮನೆಗಳಿಗೆ, ಗುಡಿ/ಮಸೀದಿ/ಚರ್ಚ್‍ಗಳಿಗೆ ಮಾತ್ರ ಸೀಮಿತವಾಗಿರಬೇಕು. ಆಗ ಮಾತ್ರ, ಸಾಮರಸ್ಯ ಸಾಧ್ಯ. ಅಲ್ಲವೇ?

ನ್ಯಾಯ ಬೇಕು

In Few things from my past on March 20, 2009 at 8:43 am

ಅಂತೂ, ನಾವು ನಾಲ್ಕು ಮಂದಿ ಶಾಲೆ ಗ್ರೌಂಡ್‍ನಲ್ಲಿ ಸೇರಿದ್ವಿ. ಎಲ್ಲರಿಗೂ ನ್ಯಾಯ ಬೇಕಾಗಿತ್ತು. “ಸರಿ ಹಂಗಾದ್ರ!! ನ್ಯಾಯಕ್ಕಾಗಿ ಹೋರಾಡೂಣು!!” ಅಂದೆ. ಎಲ್ಲಾರೂ “ಹೂಂ” ಅಂದ್ರು. “ಸರಿ ಹಂಗಾದ್ರ, ಎಲ್ಲಾರೂ ನಾಳೆ ಸಾಲೀ ಪ್ರಾರ್ಥನಾ ಟೈಮ್‍ಗೆ ರೆಡಿ ಇರ್ರಿ”, ಅಂತ ಹೇಳಿ ನಾ ಅಲ್ಲಿಂದ ಹೊರನಡಿದೆ. ಎಲ್ಲಾರೂ “ನಾಳೆ ಸಾಲಿಯೊಳಗ ಕ್ರಾಂತಿ ಮಾಡ್ತೀವಿ” ಅಂತ ಎದಿ ಉಬ್ಬಿಸಿಕೊಂಡು ಮನಿಗೆ ಹೋದ್ರು.

ಅಂದ ಹಾಗೆ, ನಿಮಗೆಲ್ಲ ಬ್ಯಾಗ್ರೌಂಡ್ ಬೇಕಲ್ವಾ? ಆವಾಗ ನಾನು ೯ನೇ ಇಯತ್ತೆ. ವಯಸ್ಸು ಮಂಗನದು.  ಇಡೀ ವ್ಯವಸ್ಥೆಯ ಬಗ್ಗೆ ಯಾವಾಗಲೂ ತಿರಸ್ಕಾರದ ಮನೋಭಾವ ಇದ್ದಂಥಾ ಸಮಯ. “ಯಾಕ ಜನಾ ಇಷ್ಟು ಸ್ವಾರ್ಥಿಗಳಾಗಿರ್ತಾರೆ? ಯಾಕ ಒಬ್ಬರ ಮೇಲೆ ಇನ್ನೊಬ್ಬರು ಹ್ಯಾಂವ ಸಾಧಿಸ್ತಾರ?”. ಅಂತೆಲ್ಲ ವಿಚಾರ ಮಾಡಿ ಉತ್ತರ ಸಿಗದೆ ಸುಮ್ಮನಾಗ್ತಿದ್ದ ಟೈಮ್ ಅದು. ಹಾಗೇನೆ, ಯಾರಾದ್ರೂ ಇನ್ನೊಬ್ಬರಿಗೆ ಮೋಸಾ ಮಾಡ್ಯಾರೆ ಅಂತ ಗೊತ್ತಾದ್ರ, ಅವರಿಗೆ ಸರಿಯಾಗಿ ಬುದ್ದಿ ಕಲಿಸಲು ಶತಾಯ ಗತಾಯ ಪ್ರಯತ್ನ ಪಡುತ್ತಿದ್ದ ಸಮಯ ಕೂಡ.

ಹಾಂ.. ಅಂದಹಂಗ, ನಾ ಎಲ್ಲಿದ್ದೆ??? ಅದ.. ನಾ ೧೦ನೇ ತರಗತಿಯೊಳಗ ಓದತಿದ್ದೆ. ನಮ್ಮದು ಹಳ್ಳಿ ಹೈಸ್ಕೂಲು. ಒಬ್ಬೊಬ್ಬ ಮಾಸ್ತರೂ ಎರಡೆರಡು ವಿಷಯ ಕಲಿಸುತ್ತಿದ್ರು.  ಕೆಲವೊಂದು ವಿಷಯಗಳಿಗೆ ಮೇಷ್ಟೇ ಇರ್ತಿರಲಿಲ್ಲ. ಇಂಥಾ ಸಮಯದಲ್ಲಿ, ಒಬ್ಬ ಬಿ.ಎಸ್‍ಸಿ ಮುಗಿಸಿದವರು, ತಾನು ಜೀವಶಾಸ್ತ್ರ ಹೇಳಿಕೊಡ್ತೀನಿ ಅಂತ ನಮ್ಮ ಶಾಲೆಗೆ ಬಂದ್ರು. ನಮ್ಮ ಗುರುಗಳೆಲ್ಲನೂ ಅವರನ್ನ ತುಂಬು ಹೃದಯದಿಂದ ತಮ್ಮ ಗುಂಪಿಗೆ ಸೇರಿಸಿಕೊಂಡ್ರು. ಅದರ ಅವಶ್ಯಕತೆಯೂ ಅವರಿಗಿತ್ತು ಅನ್ನಿ. ಮುಂದೆ ೬ ತಿಂಗಳು ನಮ್ಮ ಜೀವಶಾಸ್ತ್ರದ ಪಾಠಗಳು ಚನ್ನಾಗಿಯೇ ನಡಿದವು. ಎಂದೋ ಒಮ್ಮೆ ಶಾಲೆಯ ಮುಖ ನೋಡುತ್ತಿದ್ದ ನಮ್ಮಂಥವರೂ ತಪ್ಪಿಸದೇ ಪಾಠಗಳಿಗೆ ಹಾಜರಾಗತೊಡಗಿದ್ವಿ.

ಎಷ್ಟು  ದಿನ ಇದೆಲ್ಲ ನಡೀತದ ಹೇಳಿ? ಒಳ್ಳೆಯದೇನೋ ಆಗ್ತಾಯಿದೆ ಅಂತ ಖುಶಿಪಡಬೇಕಾದ ಜನಾನೇ ಅದನ್ನ ಹಾಳುಮಾಡಿ ಖುಶಿಪಡ್ತಾರೆ. ಇಲ್ಲೂ ಅದೇ ಆಯ್ತು. ಜೀವಶಾಸ್ತ್ರದ ಮೇಷ್ಟ್ರ ಮೇಲೆ ಎಲ್ಲರಿಗೋ ಎಲ್ಲಿಲ್ಲದ ಮತ್ಸರ ಪ್ರಾರಂಭವಾಯ್ತು. ಅವರ ಮೇಲೆ ಇಲ್ಲದ ಸಲ್ಲದ ಆರೋಪಗಳೂ ಪ್ರಾರಂಭವಾದವು.  ರಾಜಕೀಯ ಸಾರ್‍!!! ಜನ ರಾಜಕೀಯ ಮಾಡ್ತಾರೆ. ಅಂತೂ, ಆ ಜೀವಶಾಸ್ತ್ರದ ಮೇಷ್ಟ್ರನ್ನು ಕೆಲಸದಿಂದ ತೆಗೆದು ಹಾಕಿದ್ರು.

ನನಗೆ ಇದೆಲ್ಲ ದೊಡ್ಡ ಷಡ್ಯಂತ್ರವಾಗಿ ಕಂಡಿತು. ಆ ಮೇಷ್ಟ್ರಿಗೆ ಅನ್ಯಾಯವಾಗಿದೆ ಅನ್ನಿಸ್ತು. “ಅವರಿಗೆ ನ್ಯಾಯ ಕೊಡಿಸಬೇಕು, ಅದಕ್ಕಾಗಿ ಏನು ಬೇಕಾದ್ರೂ ಮಾಡಲಿಕ್ಕೆ ಸಿದ್ಧ” ಎಂಬ ಪ್ರಬಲ ನಿರ್ಧಾರದೊಂದಿಗೆ ನಾನು ನನ್ನ ಕೆಲ ಮಿತ್ರರೊಂದಿಗೆ ನಾನು ಈ ವಿಷಯ ಚರ್ಚಿಸಿದೆ.  ನಾನು ಹೇಳಿದ್ದೆ ತಡ, ಅವರೂ ರೆಡಿ. ಸಂಜೆ ಶಾಲೆಯ ಗ್ರೌಂಡಿನಲ್ಲಿ ಸೇರುವುದು ಅಂತ ನಿರ್ಧಾರವೋ ಆಯ್ತು. ಸಂಜೆ ಎಲ್ಲರೂ ಶಾಲೆಯ ಮೈದಾನದಲ್ಲಿ ಸೇರಿದ್ವಿ. ಮೇಲೇ ಹೇಳಿದಂತೆ ನಿರ್ಧರಿಸಿ, ನ್ಯಾಯವನ್ನ ಕೇಳೋದು ಅಂದುಕೊಂಡ್ವಿ.

ರಾತ್ರಿಯೆಲ್ಲ “ನಾಳೆ ಏನು ಮಾಡೋದು?” ಅಂತ ವಿಚಾರ ಮಾಡಿದ್ವಿ. ರಾತ್ರಿ ೩ ಗಂಟೆಯವರೆಗೂ ಕೂತು ಬ್ಯಾನರ್ ಬರೆದ್ವಿ. “ನ್ಯಾಯ ಬೇಕು..”, “ಶಿಕ್ಷಣದಲ್ಲಿ ರಾಜಕೀಯ ಬೇಡ..”, “ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕದಿರಿ..” ಇತ್ಯಾದಿ ಬೊರ್ಡ‍ಗಳನ್ನ ಬರೆದು ಮುಗಿಸಿ, ಶಾಲೆಯ ಹಿಂಬದಿಯಲ್ಲಿ ಮುಚ್ಚಿಟ್ವಿ. ಅದ ಸಮಯಕ್ಕ ಸರಿಯಾಗಿ ನಮ್ಮ ಮೇಷ್ಟ್ರೋಬ್ರು ಅಲ್ಲಿಗೆ ಬಂದ್ರು. ಅವರಿಗೆ, ನಮ್ಮ ಈ ಬಂಡಾಯದ ಬಗ್ಗೆ ಎಲ್ಲಿಂದಲೋ ಸುಳಿವು ಸಿಕ್ಕಿತ್ತು ಅನ್ನಿಸ್ತದೆ. ಇಲ್ಲಾಂದ್ರೆ ಅವರ್ಯಾಕೆ ಬೆಳಿಗ್ಗೆ ೩ ಗಂಟೆಗೆ ಶಾಲೆಯ ಹತ್ರ ಬರ್ತಾರೆ ಹೇಳಿ. ಎಲ್ಲಿ, ನಾವು ಸಿಕ್ಕಿ ಹಾಕಿಕೊಳ್ತೀವೋ ಎಂಬ ಭಯ ನಮಗೆ ಪ್ರಾರಮ್ಭವಾಗಿತ್ತು. ಅವರು ನನ್ನ ಹತ್ತಿರ ಬಂದವರೆ, – “ಕುಲಕರ್ಣಿ, ಎನಾದ್ರೂ ಕ್ರಾಂತಿ ಮಾಡ್ತೀನಿ ಅಂದುಕೊಂಡಿದ್ರ, ಅದನ್ನ ಮರತಬಿಡು. ನಿಮ್ಮ ಭವಿಷ್ಯ ನಮ್ಮ ಕೈಯಾಗ ಅದ ಅನ್ನೂದನ್ನ ಮರಿಬ್ಯಾಡ್ರಿ!!  ಇನ್ನೇನು, ನಾಳೆಯಿಂದ ಪರೀಕ್ಷೆಗೆ ಫಾರ್ಮ್ ತುಂಬಬೇಕು…” ಅಂತಹೇಳಿ, ನನ್ನ ಒಂದು ಸಲ ದುರುಗೊಟ್ಟಿ ನೋಡಿ, ಅಲ್ಲಿಂದ ಹೋರಟು ಹೋದ್ರು. ಒಂದು ಕ್ಷಣದಲ್ಲೇ, ನನಗೆ,  ಮತ್ತು ನನ್ನ ಜೊತೆ ಬಂದ ಇನ್ನೊಬ್ಬರಿಗೆ ಬೆವೆರಿಳಿಯಿತಿ. ಅದ್ರೆ, ಅವರು ಹೋದ ಐದು ನಿಮಷದಲ್ಲೆ, ಮತ್ತೆ ನಾನವರಿಗೆ ಹೇಳಿದೆ, “ಏ, ಇವೆಲ್ಲ ಇರೋವೇ. ಅವರು ನಮ್ಮನ್ನ ಹೆದ್ರಿಸಲಿಕ್ಕೆ ಹಿಂಗ ಮಾಡ್ಲಿಕತ್ತಾರ. ನಾವು ಮಾತ್ರ ಹೆದ್ರೋದು ಬ್ಯಾಡ..”.

ಮುಂಜಾನೆ ೧೦ ಗಂಟೆಗೆ ಪ್ರಾರ್ಥನೆ. ನಾವು ೯:೩೦ಕ್ಕೇ ಶಾಲೆಯಲ್ಲಿದ್ದೆವು. ಬರೀ ಹುಡುಗರಿದ್ರೆ, ಹೊಡೆದು ಓಡಿಸಬಹುದು ಅಂತ, ನಾಲ್ಕಾರು ಹುಡುಗಿಯರನ್ನೂ ಜೊತೆ ಸೇರೆಸಿಕೊಂಡೆವು.  “೧೦ ಗಂಟೆಯ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ, ನಾವು ಯಾರೂ ಒಳಗೆ ಹೋಗಬಾರದು, ಎಲ್ಲರೂ, ಸತ್ಯಾಗ್ರಹಕ್ಕೆ ಕೋರಬೇಕು” ಎಂದೆಲ್ಲ ನಮ್ಮ ಸಹಪಾಠಿಗಳನ್ನು ಒಲಿಸಲು ಪ್ರಯತ್ನಿಸಿದೆವು.

ಪ್ರಾರ್ಥನೆ ಮುಗಿಯಿತು. ಒಂದೊಂದೇ ತರಗತಿಯ ಹುಡುಗರೂ, ಇರುವೆಗಳಂತೆ ಒಬ್ಬರ ಹಿಂದೆ ಒಬ್ಬರು ತರಗತಿಯ ಒಳನಡೆದರು. ನಮಗೆಲ್ಲ, ನಾವು ಮಾಡಿದ ಪ್ರಯತ್ನ, ವ್ಯರ್ಥವಾಗುತ್ತಿದ್ದದ್ದನ್ನು ಕಂಡು, ಹೊಟ್ಟೆ ಉರಿಯಿತು. ನಾವು ಮೋವರು ಮಿತ್ರರು, ಮತ್ತು ನಾಲ್ಕಾರು ಹುಡುಗಿಯರು, “ಬೇಕೇ ಬೇಕು, ನ್ಯಾಯ ಬೇಕು”, “ನಮ್ಮ ಗುರುಗಳಿಗೆ ನ್ಯಾಯ ಕೊಡಿ”… ಹೀಗೆ ಇನ್ನೂ ಏನೇನೋ ಕೂಗತೊಡಗಿದೆವು. ಎಲ್ಲಿಯೋ ಬಚ್ಚಿಟ್ಟಿದ್ದ ಬ್ಯಾನರ್‍ಗಳೂ ನಮ್ಮ ಕೈಗೆ ಬಂದವು.

ಇದನ್ನ ನಮ್ಮ ಗುರುವರ್ಗ ಮತ್ತು ಶಾಲೆಯ ಆಡಳಿತ ಮಂಡಳಿ ಅಪೇಕ್ಶಿಸಿರಲಿಲ್ಲ. ಅವರಿಗೆ ಒಂದು ಕ್ಷಣ ಏನೂ ತೋಚಲಿಲ್ಲ. ಆದ್ರೆ, ಹತ್ತೇ ನಿಮಿಷದಲ್ಲಿ,  ಅವರು ನಮ್ಮ ಬಳಿಗೆ ಬಂದು, “ನಿಮ್ಮ ಜೊತೆ ಆಮೇಲೆ ಮಾತಾಡ್ತೀವಿ. ಈಗ, ಕ್ಲಾಸ್‍ಗೆ ನಡೀರಿ..”. ಅಂದರು. ನಮಗೆ, ಅವರ ಜೊತೆ ವೈರ ಕಟ್ಟಿಕೊಳ್ಳೋದು ಬೇಕಿರಲಿಲ್ಲ. “ಸರಿ ಹಂಗಂದ್ರ, ನಮಗ ನ್ಯಾಯ ಸಿಗೋದಾದ್ರ, ನಾವು ಒಳಗ ಹೋಗ್ತೀವಿ.” ಅಂತ ಒಳನಡಿದ್ವಿ. ಅಷ್ಟರಲ್ಲೇ, ನಮ್ಮೋರಿನ ಪೇಪರ್ ಏಜಂಟು, ನಮ್ಮ ಬ್ಯಾನರ್‍ಗಳ ಫೋಟೋ ತಕ್ಕೊಂಡಿದ್ದ.

ನಾವು ತರಗತಿಗೆ ಹೋದಮೇಲೆ, ನಮ್ಮ ಗುರುವೃಂದ ಅವರ ರೂಮ್‍ನಲ್ಲಿ ಸೇರಿದ್ರು. ”ಸರಿಯಿನ್ನು… ಇವತ್ತು ನಮ್ಮ ಕ್ಲಾಸ್ ನಡಿಯುವದಿಲ್ಲ”, ಅಂದುಕೊಂಡು ನಾನು ಮನೆ ಸೇರಿದೆ. ಅತ್ತ ನಾನು ಹೋದ ಸ್ವಲ್ಪ ಹೊತ್ತಿನಲ್ಲೇ, ನನ್ನ ಜೊತೆಯಿದ್ದ ಇನ್ನಿಬ್ಬರು ಹುಡುಗರಿಗೆ ಬೆತ್ತದ ಪೂಜೆಯಾಯ್ತು. ಅವರ ಕೈ, ಕಾಲು, ಪೃಷ್ಟ ಬಾವು ಬರುವಂತೆ ಹೊಡೆದಿದ್ದರು.

ಮರುದಿನ ನಾನು ಶಾಲೆಗೆ ಹೋದಾಗ, “ನಮಗೆಲ್ಲ ಪರೀಕ್ಷೆಯ ಫಾರ್ಮ್ ತುಂಬಲು ಬಿಡುವುದಿಲ್ಲ” ಎಂಬ ಸುದ್ದಿ ಇಡೀ ಶಾಲೆಯ ತುಂಬ ಹರಡಿತ್ತು. ನನಗೆ ಭಯ ಪ್ರಾರಂಭವಾಯ್ತು. ನನ್ನ ಜೊತೆ ಇದ್ದ ಇಬ್ಬರು, ಅವರ ತಂದೆಯನ್ನು ಕರೆದುಕೊಂಡು ಬಂದು ಕ್ಷಮೆ ಕೇಳಿ ಪಾರಾದರು. ಆದರೆ ನಮ್ಮದೋ ಅಲ್ಲಿ ಅತಿ ಗೌರವಿಸಲ್ಪಡುತ್ತಿರುವ ಕುಟುಂಬಗಳಲ್ಲಿ ಒಂದು. ಅದಕ್ಕೆ ನನಗೆ ಹೊಡೆತಗಳೂ ಬೀಳಲಿಲ್ಲ. ಆದ್ರೆ ನನ್ನ ತಂದೆಯನ್ನು ಕರೆದುಕೊಂಡುಬರಬೇಕು, ಇಲ್ಲದಿದ್ದರೆ, ಪರೀಕ್ಷೆಯ ಫಾರ್ಮ್ ತುಂಬಲು ಬಿಡುವುದಿಲ್ಲ ಎಂದು ಹೇಳಿದ್ರು. “ಛೇ.. ನನ್ನ ಅಪ್ಪನನ್ನ ಎಂಥ ಇಕ್ಕಟ್ಟಿನಲ್ಲಿ ಸಿಕ್ಕಿಸಿದೆನಲ್ಲ” ಎಂಬ ಬೇಜಾರಿನೊಂದಿಗೇ, ಅಪ್ಪನಿಗೆ ಈ ವಿಷಯ ತಿಳಿಸಿದೆ. ಅವರು ಇದೆಲ್ಲ ಇದ್ದದ್ದೇ ಎನ್ನುವವರ ಥರ ಶಾಲೆಗೆ ಬಂದರು. ಅಲ್ಲಿ, ನನ್ನ ಗುರುಗಳ ನಿಂದನೆಯನ್ನೋ ತಡೆದುಕೊಂಡರು. 

ನನಗೆ ನನ್ನ ಪಾಪಪ್ರಜ್ಞೆ ಕಾಡಲಾರಂಭಿಸಿತು. ಎಂದೂ ಅಪವಾದಕ್ಕೊಳಗಾಗದ ನನ್ನ ಅಪ್ಪ, ಎಲ್ಲರೂ ಗೌರವಿಸುವ ಅವರು, ನನ್ನಿಂದಾಗಿ ನಿಂದನೆಗೊಳಗಾಗಬೇಕಾಯ್ತಲ್ಲ ಎಂದು. ಎರಡು ದಿನ ಯೋಚಿಸಿದೆ.  ಈ ವರ್ಷ ಪರೀಕ್ಶೆ ತೆಗೆದುಕೊಳ್ಳೂವದು ಬೇಡ ಎಂದು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಬರಲು ಇನ್ನೂ ಕೆಲವು ಚಿಕ್ಕಪುಟ್ಟ ಕಾರಣಗಲೂ ಇದ್ದವು. ಮನೆಯಲ್ಲಿ ಇದನ್ನೂ ಹೇಳಿದೆ. ಅಪ್ಪ “ಸರಿ. ಆದ್ರೆ, ಇನ್ನೊಮ್ಮೆ ಸರಿಯಾಗಿ ವಿಚಾರ (ಯೊಚನೆ) ಮಾಡು” ಎಂದರು. ನಾನು, “ಆಗಲೇ ಎಲ್ಲ ವಿಚಾರ ಮಾಡೀನಿ”. ಅಂದೆ. ಆ ವರ್ಷ ಪರೀಕ್ಷೆಗಳು ಮುಗಿದು ಹೋದವು (ನಾನಿಲ್ಲದೆ :) ).

ಇತ್ತ, ಯಾವ ಜೀವಶಾಸ್ತ್ರದ ಗುರುಗಳಿಗೋಸ್ಕರ ಈ ಸ್ಟ್ರೈಕ್ ಮಾಡಿದ್ದೆವೋ, ಅವರು ನಾವ್ಯಾರೋ ಎನ್ನುವಂತೆ ಸುಮ್ಮನಾದ್ರು. ಅವರು, ಮತ್ತೆ ಶಾಲೆ ಸೇರಿದ್ರು; ಮತ್ತೆ ಮೇಷ್ಟ್ರಾದ್ರು. ನಾನು ಶಾಲೆ ಬಿಟ್ಟೆ……

ಇದೆಲ್ಲ ಮುಗಿದು ಹತ್ತು ಹನ್ನೆರೆಡು ವರ್ಷಗಳಾಗಿವೆ. ಈಗ ನಾನೂ, ನನ್ನ ಹೊಟ್ಟೆ ಬಟ್ಟೆಗೆ ಕಡಿಮೆಇಲ್ಲದ ಉದೋಗದಲ್ಲಿದ್ದೇನೆ. ಆದ್ರೆ, ಇನ್ನೂ ಅನೇಕಸಲ ಅನ್ನಿಸುತ್ತೆದೆ – ಯಾರಿಗೆ ಬೇಕಾಗಿತ್ತು ನ್ಯಾಯ?

Do we have moral to support LTTE?

In We the people on October 15, 2008 at 6:51 am

The move by Tamilnadu MPs to resign (http://www.hindu.com/2008/10/15/stories/2008101557920100.htm)  if ceasefire is not ensured in Sri Lanka is really ridiculous. These are the people who spoke about the terrorism in India as the right of the terrorist. These are the people, who asked other counties not to interfere in our national security issues.

The way Sri Lanka is handling this issue may be rude and wrong. But, as a county, Sri Lanka has to see that it has to be united. It has the responsibility of keeping the nation integrated. Also, it has the responsibility of ensuring peaceful life for the its citizens.

Looking from the other angle, LTTE has never come down from the demand of a new TAMIL nation. We all know what it takes to divide a nation. Also we all know, what is the impact of it. When India got divided into India and Pakistan, we witnessed more than a million Murders (I do call it as murders). People had to move from their original places to unknown. They lost their parents, partners, children, relatives and friends. Though the division was unavoidable, as it could have consumed more lives than this, the loss of lives is not acceptable.

So, if LTTE goes on demanding for a separate Tamil nation, the violence is never going to get down. It has to learn from USA (only thing that can be learnt from USA), that instead of dividing a nation, one should try to obtain the rights of equality. This also puts International pressure on Sri Lanka to treat Tamilians as equal as Sri Lankans.

Just see the things in Kashmir. The Harriet is trying to make Kashmir an independent country. If Pakistan starts a pubic campaign for it, will any country support it? For sure not. The same case is there in Sril Lanka. So hope Indian politicians keep silence, and let the Sri Lanka take its own steps.